Brihatmann | Divine Thoughts

DIVINE THOUGHTS

ಬ್ರಾಹ್ಮಣ್ಯ......‌‌‌....

Om Namo Naaraayanaaya

ಮೊದಲು ಬ್ರಾಹ್ಮಣರು ಕಡೇಪಕ್ಷ ಗಾಯತ್ರಿ ಜಪವನ್ನು ಬಹಳ ಶ್ರದ್ಧೆಯಿಂದ ಮಾಡುವಂತವರಾಗಬೇಕು. ಆವಾಗ ಆತ್ಮ ಸ್ಥೈರ್ಯ ಉಂಟಾಗುತ್ತದೆ ಮತ್ತು ಎಲ್ಲವನ್ನು ಎದುರಿಸಿ ಮೆಟ್ಟಿನಿಲ್ಲುವ ಶಕ್ತಿ ವೃದ್ಧಿಸುತ್ತದೆ.

ಬ್ರಾಹ್ಮಣ್ಯಕ್ಕೆ ವಿರುದ್ಧವಾದ ಕೆಲಸಗಳನ್ನು ಎಷ್ಟೋ ಬ್ರಾಹ್ಮಣ ಕುಟುಂಬದ ಮಕ್ಕಳು ಮಾಂಸ ಮತ್ತು ಮಧ್ಯವನ್ನು ಸೇವಿಸುತ್ತಿದ್ದಾರೆ ಮತ್ತು ವರ್ಣಸಂಕ್ರಮಣಕ್ಕೆ ತುತ್ತಾಗಿದ್ದಾರೆ ಮತ್ತು ತುತ್ತಾಗುತ್ತಿದ್ದಾರೆ. ಇದರಿಂದಾಗಿ ಬ್ರಾಹ್ಮಣ ಕುಲ ಅಪಹಾಸ್ಯಕ್ಕೆ ತುತ್ತಾಗಿರುವುದು ಬಹಳ ಶೋಚನೀಯ ವಿಚಾರವಾಗಿದೆ.

ಕೇವಲ ಜನಿವಾರವನ್ನು ದರಿಸುವುದರಿಂದ ನಾವು ಬ್ರಾಹ್ಮಣರಾಗವುದಿಲ್ಲ ಮತ್ತು ಬ್ರಾಹ್ಮಣ್ಯ ಪದವಿ ಸಿಗುವುದಿಲ್ಲ. ಅದು ಅಷ್ಟೊಂದು ಸುಲಭದ ವಿಚಾರವೂ ಅಲ್ಲ.

ಬ್ರಾಹ್ಮಣ ಕುಲದಲ್ಲಿ ಹುಟ್ಟುವುದೇ ಒಂದು ಸುಕೃತ. ಈ ಸೌಭಾಗ್ಯ ಎಲ್ಲರಿಗೂ ಲಭಿಸುವುದಿಲ್ಲ. ಕೆಲವರು ಈ ಸೌಭಾಗ್ಯವನ್ನು ಸದುಪಯೋಗ ಪಡಿಸಿಕೊಂಡು ಬ್ರಾಹ್ಮಣ್ಯದ ಹಾದಿಯಲ್ಲಿ ಮುನ್ನಡೆದು ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಹೊಂದುತ್ತಾರೆ.

ಆದರೆ ಈಗಿನ ಪ್ರಸ್ತುತ ವಿದ್ಯಮಾನದಲ್ಲಿ ಬ್ರಾಹ್ಮಣ್ಯಕ್ಕೆ ಅಪಚಾರವಾಗುತ್ತಿರುವುದರಿಂದ ಬ್ರಾಹ್ಮಣ ಕುಲ ವಿನಾಶದ ಅಂಚಿಗೆ ಸರಿಯುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ

ಮುಂದೊಂದು ದಿವಸ ಬ್ರಾಹ್ಮಣ ಕುಲವಿತ್ತೆಂದು ಚರಿತ್ರೆಯ ಪುಟದಲ್ಲಿ ಓದುವ ಸಂದರ್ಭ ಬಂದರೂ ಬರಬಹುದು.

ಇದಕ್ಕೆಲ್ಲ ನಾವೇ ಕಾರಣರು.

ಒಮ್ಮೆ ಆತ್ಮಾವಲೋಕನ ಮಾಡಿನೋಡಿ. ಈ ವಿಷಯ ಸರಿಯೆನಿಸಿದಲ್ಲಿ ಕಾರ್ಯ ತತ್ಪರರಾಗಿ ಬ್ರಾಹ್ಮಣ್ಯದ ಹಾದಿಯಲ್ಲಿ ನಡೆದು ಲೋಕಕಲ್ಯಾಣದ ಕೆಲಸದಲ್ಲಿ ತೊಡಗಿಸಿಕೊಂಡು ಕುಲವನ್ನು ಉದ್ದರಿಸುವ.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ ಅರ್ಥ

Om Namo Naaraayanaaya

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ
ಶಿವಶ್ಚ ಹೃದಯಂ ವಿಷ್ಣು ವಿಷ್ಣೋಶ್ಚ ಹೃದಯಂ ಶಿವಃ
ಯಥಾ ಶಿವಮಯೋ ವಿಷ್ಣುಃ ಏವಂವಿಷ್ಣು ಮಯಶ್ಶಿವಃ
ಯಥಾನ್ತರಂ ನ ಪಶ್ಶಾಮಿ ತಥಾಮೇ ಸ್ವಸ್ತಿರಾಯುಷಿ
ಶ್ರೀ ತಥಾಮೇ ಸ್ವಸ್ತಿರಾಯುಷಿತ್ಯೋಂ ನಮಃ ಇತಿ

ಇದರ ಅರ್ಥ ಈ ರೀತಿ ಇದೆ .........

ಶ್ರೀ ವಿಷ್ಣುವಿನ ರೂಪದಲ್ಲಿ ಶಿವನಿದ್ದಾನೆ ಶ್ರೀ ಶಿವನ ರೂಪದಲ್ಲಿ ವಿಷ್ಣುವಿದ್ದಾನೆ - ಶಿವನೇ ವಿಷ್ಣುಃ ವಿಷ್ಣುವೇ ಶಿವಃ

ಶಿವನ ಹೃದಯದಲ್ಲಿ ವಿಷ್ಣು ನೆಲೆಸಿದ್ದಾನೆ ವಿಷ್ಣುವಿನ ಹೃದಯದಲ್ಲಿ ಶಿವ ನೆಲಸಿದ್ದಾನೆ

ಯಾವುದು ಶಿವಮಯವಾಗಿದೆಯೋ ಅದು ವಿಷ್ಣುವಿನಿಂದ ತುಂಬಲ್ಪಟ್ಟಿದೆ ಯಾವುದು ವಿಷ್ಣುಮಯವಾಗಿದೆಯೋ ಅದು ಶಿವನಿಂದ ತುಂಬಲ್ಪಟ್ಟಿದೆ

ಶಿವ ಬೇರೆಯಲ್ಲ ವಿಷ್ಣು ಬೇರೆಯಲ್ಲ ಶಿವ ಶಕ್ತಿ ಮತ್ತು ವಿಷ್ಣು ಶಕ್ತಿ ಗಳೆರಡೂ ಒಂದೇ ಪರಂಬ್ರಹ್ಮವಾಗಿದೆ ಎಂದು ತಿಳಿದಾಗ ಎಲ್ಲವೂ ಶುಭವಾಗುವುದು.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ದಿಗ್ದೇವತಾನಮಸ್ಕಾರದ ಮಹತ್ವ

Om Namo Naaraayanaaya

ಓಂ ನಮೋ ಪ್ರಾಚ್ಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ದಕ್ಷಿಣಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಪ್ರತೀಚ್ಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಉದೀಚ್ಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಊರ್ಧ್ವಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಅಧರಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಅವಾಂತರಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ

ಯಾವ ದೇವನಿಂದ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ದಿಕ್ಕು ಗಳು, ಊರ್ದ್ವ ಮತ್ತು ಅಧೋ ಲೋಕಗಳು ಮತ್ತು ಸಮಸ್ತವು ವ್ಯಾಪಿಸಲ್ಪಟ್ಟಿದಿಯೊ, ತುಂಬಲ್ಪಟ್ಟಿದಿಯೊ ಮತ್ತು ಪೋಷಿಸಲ್ಪಟ್ಟಿದಿಯೊ ಅಂತಹ ಪರಂಬ್ರಹ್ಮನಿಗೆ ನನ್ನ ನಮಸ್ಕಾರಗಳು.

ಯಾವ ದೇವನು ನಮ್ಮನ್ನು ಆಪಾದಮಸ್ತಕವಾಗಿ ಆಂತರ್ಯದಲ್ಲಿ ವ್ಯಾಪಿಸಿಕೊಂಡಿದ್ದಾನೊ ಮತ್ತು ಪೋಷಿಸುತ್ತಿದ್ದಾನೊ ಅಂತಹ ಪರಂಬ್ರಹ್ಮನಿಗೆ ನನ್ನ ನಮಸ್ಕಾರಗಳು

ಯಾವ ದೇವನು ನಮ್ಮಲ್ಲಿ ಆಪಾದಮಸ್ತಕವಾಗಿ ವ್ಯಾಪಿಸಿರುವ ಎಲ್ಲಾ ದಿಕ್ಕುಗಳು ಮತ್ತು ಹದಿನಾಲ್ಕು ಲೋಕಗಳನ್ನು ವ್ಯಾಪಿಸಿಕೊಂಡು ಸಮಸ್ತ ಜೀವಾತ್ಮರನ್ನು ಮತ್ತು ದೇವತೆಗಳನ್ನು ಪೋಷಿಸುತ್ತಿದ್ದಾನೊ ಅಂತಹ ಪರಂಬ್ರಹ್ಮನಿಗೆ ನನ್ನ ನಮಸ್ಕಾರಗಳು

ಅಂತಹ ಪರಂಬ್ರಹ್ಮನು ನಮಗೆ ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಕರುಣಿಸಲಿ

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ಪರಂಬ್ರಹ್ಮ

Om Namo Naarayanaaya

ಇಡೀ ವಿಶ್ವವನ್ನು ವ್ಯಾಪಿಸಿರುವ ಪರಂಬ್ರಹ್ಮನು ಎಲ್ಲದರ ಒಳಗು ಮತ್ತು ಹೊರಗು ತುಂಬಿಕೊಂಡು ತನ್ನನ್ನು ನಾನಾ ರೂಪಗಳಲ್ಲಿ, ಗುಣಗಳಲ್ಲಿ, ಬಣ್ಣಗಳಲ್ಲಿ, ಆಕಾರಗಳಲ್ಲಿ, ಅನಂತ ಹೆಸರಿನಲ್ಲಿ ವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳುತ್ತಿದ್ದಾನೆ ಮತ್ತು ಎಲ್ಲವನ್ನು ಪೋಷಿಸುತ್ತಿದ್ದಾನೆ.

ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಶು
ಅರ್ಥ.....
ಪರಂಬ್ರಹ್ಮನು ಎಲ್ಲದರ ಒಳಗೆ ತನ್ನ ಮನೆಯನ್ನು ಮಾಡಿಕೊಂಡು ವಾಸಮಾಡುತ್ತಿದ್ದಾನೆ ಮತ್ತು ಸಾಕ್ಷಿಭೂತನಾಗಿದ್ದಾನೆ ಮತ್ತು ಎಲ್ಲವನ್ನು ಪೋಷಿಸುತ್ತಿದ್ದಾನೆ.

ಅಂತರ್ಬಹಿಶ್ಚ ತತ್ಸರ್ವಂ ವಾಪ್ಯ ನಾರಾಯಣ ಸ್ತಿತಃ
ಅರ್ಥ.....
ಪರಂಬ್ರಹ್ಮನು ಎಲ್ಲದರ ಒಳಗು ಮತ್ತು ಹೊರಗು ವ್ಯಾಪಿಸಿಕೊಂಡಿದ್ದಾನೆ ಅಥವ ತುಂಬಿಕೊಂಡಿದ್ದಾನೆ ಮತ್ತು ಎಲ್ಲವನ್ನು ಪೋಷಿಸುತ್ತಿದ್ದಾನೆ.

ನಮೋಸ್ತು ಅನಂತಾಯ ಸಹಸ್ರಮೂರ್ತಯೆ ಸಹಸ್ರಪಾದಾಕ್ಷಿ ಶಿರೋರುಬಾಹುವೆ ಸಹಸ್ರನಾಮ್ನೆ ಪುರುಷಾಯ ಶಾಶ್ವತೆ ಸಹಸ್ರಕೋಟಿ ಯುಗಧಾರಿಣೇ ನಮಃ.
ಅರ್ಥ.....
ಪರಂಬ್ರಹ್ಮನು ತನ್ನನ್ನು ನಾನಾ ರೂಪಗಳಲ್ಲಿ, ಗುಣಗಳಲ್ಲಿ, ಬಣ್ಣಗಳಲ್ಲಿ,ಆಕಾರಗಳಲ್ಲಿ, ಅನಂತ ಹೆಸರಿನಲ್ಲಿ ವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳುತ್ತಿದ್ದಾನೆ ಮತ್ತು ಅವನು ಅನಂತದವರೆಗೂ ಅಸ್ತಿತ್ವದಲ್ಲಿರತ್ತಾನೆ ಮತ್ತು ಎಲ್ಲವನ್ನು ಪೋಷಿಸುತ್ತಲೇ ಇರುತ್ತಾನೆ.

ಅಂತಹ ಪರಂಬ್ರಹ್ಮನನ್ನು ನಮ್ಮ ಆಂತರ್ಯದಲ್ಲಿ ಧ್ಯಾನಿಸಿ ಅವನ ಅನುಗ್ರಹದಿಂದ ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಹೊಂದಬಹುದು.

Brihatmann - The way for realization


ಸಂಧ್ಯಾವಂದನೆಯಲ್ಲಿ ಆಚಮನದ ಮಹತ್ವ

Om Nano Naarayanaaya.

ಸಂಧ್ಯಾವಂದನೆಯಲ್ಲಿ ಆಚಮನದ ಮಹತ್ವ ನನ್ನ ದೃಷ್ಟಿಯಿಂದ........‌‌‌....‌

ನನ್ನ ದೃಷ್ಟಿಯಲ್ಲಿ ಆಚಮನ ಯಜ್ಞ ಯಾಗಾದಿಗಳಿಗೆ ಸಮನಾಗಿದ್ದು, ನಮ್ಮನ್ನು ಆಂತರ್ಯದಲ್ಲಿ ಆಪಾದಮಸ್ತಕವಾಗಿ ವ್ಯಾಪಿಸಿರುವ ಪರಂಬ್ರಹ್ಮನಿಗೆ ಆಚಮನದ ಮೂಲಕ ಅರ್ಘ್ಯವನ್ನು ಕೊಟ್ಟು ಮತ್ತು ನಮ್ಮೊಳಗೆ ವ್ಯಾಪಿಸಿರುವ ಅವನ ಅಂಗಾಂಗಳನ್ನು ಸ್ಪರ್ಶಸಿ ಅವನ ಅಸ್ತಿತ್ವವನ್ನು ಅರಿತು ಪುನೀತರಾಗತ್ತೇವೆ, ದೈವಿಕರಾಗುತ್ತೇವೆ, ಪವಿತ್ರರಾಗುತ್ತೇವೆ ಮತ್ತು ವಾಸ್ತವವಾಗಿ ನಾವು ದೈವೀ ನಿಲಯವೇ ಆಗಿರುತ್ತೇವೆ. ಕಾರಣ ನಮ್ಮೊಳಗೆ ಆ ಪರಂಬ್ರಹ್ಮನು ವಾಸಿಸುತ್ತಿದ್ದಾನೆ ಅಂದರೆ ನಾವು ಒಂದು ಪವಿತ್ರವಾದ ದೇಗುಲವಾಗಿದ್ದೇವೆ. ಇದು
"ಅಂತಃಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಷು" ಎಂದು ಅರ್ಥೈಸುತ್ತದೆ. ಈ ಅಸ್ತಿತ್ವದ ಅರಿವು ಅತಿ ದುರ್ಲಭವಾದ ಮನುಷ್ಯ ಜನ್ಮಕ್ಕೆ ಹೊರತು ಮತ್ಯಾವ ಜೀವಕೋಟಿಗಳಿಗೆ ಲಭ್ಯವಿಲ್ಲ. ಆದ್ದರಿಂದಲೇ ಪುರಂದರದಾಸರು ಹೇಳಿದರು "ಮಾನವ ಜನ್ಮ ದೊಡ್ಡದು ಇದನು ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರ" ಎಂದು.

ಆಚಮನದ ಕ್ರಮ ಮತ್ತು ಅರ್ಥ.... ಈ ಆಚಮನದ ಕ್ರಮವನ್ನು ಆಯಾ ವೇದಗಳಲ್ಲಿ ಹೇಳಿರುವ ಕ್ರಮದಂತೆ ಆಚರಿಸಿ...

ಓಂ ಕೇಶವಾಯ ಸ್ವಾಹ ಎಂದು ಒಂದು ಉದ್ಧರಣೆಯಷ್ಟು ಗಂಗೆಯನ್ನು ನಮ್ಮ ಆಂತರ್ಯದಲ್ಲೀ ನೆಲಸಿರುವ ಕೇಶವ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನಿಗೆ ಅರ್ಪಿಸುತ್ತೇವೆ.

ಓಂ ನಾರಾಯಣಾಯ ಸ್ವಾಹ ಎಂದು ಮತ್ತೊಂದು ಉದ್ಧರಣೆಯಷ್ಟು ಗಂಗೆಯನ್ನು ನಮ್ಮ ಆಂತರ್ಯದಲ್ಲಿ ನೆಲಸಿರುವ ನಾರಾಯಣ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನಿಗೆ ಅರ್ಪಿಸುತ್ತೇವೆ.

ಓಂ ಮಾಧವಾಯ ಸ್ವಾಹ ಎಂದು ಇನ್ನೊಂದು ಉದ್ಧರಣೆಯಷ್ಟು ಗಂಗೆಯನ್ನು ನಮ್ಮ ಆಂತರ್ಯದಲ್ಲಿ ನೆಲಸಿರುವ ಮಾಧವ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನಿಗೆ ಅರ್ಪಿಸುತ್ತೇವೆ.

ಒಂ ಗೋವಿಂದಾಯ ನಮಃ ಎಂದು ನಮ್ಮ ಆಂತರ್ಯದಲ್ಲಿ ನೆಲಸಿರುವ ಗೋವಿಂದ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನ ಬಲಗೈ ಅಂಗೈಯನ್ನು ನಮ್ಮ ಎಡಗೈಯಿಂದ ಸ್ಪರ್ಶಿಸುತ್ತೇವೆ

ಓಂ ವಿಷ್ಣುವೇ ನಮಃ ಎಂದು ನಮ್ಮ ಆಂತರ್ಯದಲ್ಲೀ ನೆಲಸಿರುವ ವಿಷ್ಣು ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನ ಎಡಗೈ ಅಂಗೈಯನ್ನು ನಮ್ಮ ಬಲಗೈಯಿಂದ ಸ್ಪರ್ಶಿಸುತ್ತೇವೆ.

ಓಂ ಮಧುಸೂದನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಮೇಲ್ತುಟಿಯನ್ನು

ಓಂ ತ್ರಿವಿಕ್ರಮಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಕೆಳತುಟಿಯನ್ನು

ಓಂ ವಾಮನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲಗಡೆ ಕೆನ್ನೆಯನ್ನು

ಓಂ ಶ್ರೀಧರಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡಗಡೆ ಕೆನ್ನೆಯನ್ನು

ಓಂ ಹೃಷೀಕೇಶಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಕೇಶವನ್ನು

ಓಂ ಪದ್ಮನಾಭಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ನಾಭಿ ಮತ್ತು ಪಾದಗಳನ್ನು

ಓಂ ದಾಮೋದರಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಶಿರಸ್ಸನ್ನು

ಓಂ ಸಂಕರ್ಷಣಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ನಾಸಿಕಾಗ್ರವನ್ನು

ಓಂ ವಾಸುದೇವಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲ ನಾಸಿಕವನ್ನು

ಓಂ ಪ್ರದ್ಯುಮ್ನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡ ನಾಸಿಕವನ್ನು

ಓಂ ಅನಿರುದ್ಧಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲಗಣ್ಣನ್ನು

ಓಂ ಪುರುಷೋತ್ತಮಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡಗಣ್ಣನ್ನು

ಓಂ ಅಧೋಕ್ಷಜಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲಗಿವಿಯನ್ನು

ಓಂ ನಾರಸಿಂಹಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡಗಿವಿಯನ್ನು

ಓಂ ಅಚ್ಯುತಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ನಾಭಿ ಅಥವ ಹೊಟ್ಟೆಯನ್ನು

ಓಂ ಜನಾರ್ಧಾನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಹೃದಯ ಮಂಡಲವನ್ನು

ಓಂ ಉಪೇಂದ್ರಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಶಿರಸ್ಸನ್ನು

ಓಂ ಹರಿಯೇ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲ ಭುಜವನ್ನು

ಓಂ ಶ್ರೀ ಕೃಷ್ಣಾಯ ನಮಃ ಎಂದು ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡ ಭುಜವನ್ನು ಸ್ಪರ್ಶಿಸಿ

ನಮ್ಮಲ್ಲಿ ನೆಲಸಿರುವ ಆ ಪರಂಬ್ರಹ್ಮನಿಗೆ ನಮಸ್ಕರಿಸಿ ಅವನ ಕೃಪೆಗೆ ಪಾತ್ರರಾಗುವ ಕೈಂಕರ್ಯವೇ ಆಚಮನ. ಇದರಿಂದ ನಮ್ಮ ಸುತ್ತ ಸಕಾರಾತ್ಮಕ ಅಯಸ್ಕಾಂತ ಶಕ್ತಿ ಹೆಚ್ಚುವುದು ಹೌದು.

ಈ ದಿಟ್ಟಿನಲ್ಲಿ ನಾವುಗಳು ಆಚಮನ ಮಾಡಿದ್ದೇ ಆದಲ್ಲಿ ಆ ಪರಂಬ್ರಹ್ಮನ ಕೃಪೆಗೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ.

ಆದರೆ ಇನ್ನೊಂದು ಮಾತು ನಾವು ಮಾಡುವ ಎಲ್ಲಾ ಕೈಂಕರ್ಯಗಳನ್ನು ಇದೇ ರೀತಿ ಭಗವಂತನಿಗೆ ಅರ್ಪಿಸಿದಲ್ಲಿ ಸರ್ವತೋಮುಖ ಅಭಿವೃದ್ಧಿ ಇಹ ಮತ್ತು ಪರದಲ್ಲಿ ನಿಸ್ಸಂಶಯವಾಗಿ ಆಗುವುದು.

ಈ ವಿಚಾರ ನಿಮಗೆ ‌ ಉಪಯುಕ್ತ ಎಂದೆನಿಸಿದಲ್ಲಿ ಇತರರಿಗೂ ಹಂಚಿ.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ಅದ್ವೈತ ಸಿದ್ಧಾಂತ

Om Namo Naarayanaaya.

ಅದ್ವೈತ ಸಿದ್ಧಾಂತ ನನ್ನ ದೃಷ್ಟಿಯಿಂದ......

ಮೊದಲು ಒಂದು ಉಧಾಹರಣೆಯನ್ನು ನೋಡೋಣ
ಒಂದು ಸಿಹಿಯಾದ ಮಾವಿನ ಬೀಜವನ್ನು ಬಿತ್ತೋಣ. ಆ ಬೀಜವು ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ ಹೂವುಬಿಡುತ್ತದೆ. ಹೂವುಗಳು ಕಾಯಾಗುತ್ತವೆ ಮತ್ತು ಕಾಯಿಗಳು ಹಣ್ಣಾಗುತ್ತವೆ ಮತ್ತೆ ಆ ಮಾವಿನ ಮರದ ಬೀಜಗಳನ್ನು ಬಿತ್ತಿದಾಗ ಮತ್ತೆ ಮಾವು ಮರವಾಗಿ ಬೆಳೆದು ಮಾವಿನ ಹಣ್ಣುಗಳನ್ನು ನೀಡುವುದು. ಅಂದರೆ ಯಾವ ಬೀಜವನ್ನು ಬಿತ್ತುತ್ತೇವೊ ಆಯಾ ಮರ ಅಥವ ಗಿಡಗಳು ಬೆಳೆದು ಮೂಲ ಬೀಜದ ಗುಣಧರ್ಮವನ್ನು ಹೊಂದಿರುತ್ತದೆ ಮತ್ತು ಭೌತಿಕವಾಗಿ ಅಭಿವ್ಯಕ್ತಗೊಳ್ಳತ್ತದೆ ಮತ್ತು ಹೊತ್ತು ತಂದ ಗುಣಧರ್ಮವನ್ನು ಮುಂದುವರೆಸುತ್ತದೆ.

ಹೌದು, ಆದರೆ ಈ ವಿಚಾರ ಎಲ್ಲರಿಗೂ ತಿಳಿದಿರುವಂತಹ ವಿಚಾರವೇ ಆಗಿದೆ. ನಮಗನಿಸಬಹುದು ಇದರಲ್ಲೇನಿದೆ ವಿಶೇಶ ಎಂದು.

ಹೌದು ಇದರಲ್ಲಿ ಒಂದು ಮಹತ್ತರವಾದ ವಿಶೇಷವಿದೆ.

ಹಾಗಾದರೆ ವಿಷಯಕ್ಕೆ ಬರೋಣ. ಈಗ ನಾವುಗಳು ನಮಗೆ ಒಂದು ಪ್ರಶ್ನೆಯನ್ನು ಹಾಕಿಕೊಳ್ಳೋಣ. ನಾವುಗಳು ಯಾರಿಂದ ಸೃಷ್ಟಿಸಲ್ಪಟ್ಟಿದ್ದೇವೆ. ಎಲ್ಲರಿಗೂ ತಿಳಿದಿರವ ಹಾಗೆ ಭಗವಂತನಿಂದ ಸೃಷ್ಟಿಸಲ್ಪಟ್ಟಿದ್ದೇವೆ. ಹಾಗಾದರೆ ಭಗವಂತನಲ್ಲಿ ಏನೇನು ವಿಶೇಷತೆ ಇದೆಯೊ ಅವೆಲ್ಲವೂ ನಮ್ಮಲ್ಲಿ ಇರಲೇಬೇಕಲ್ಲವೇ.

ಅಂದರೆ ನಾವುಗಳು ಭಗವಂತನ ಪ್ರತಿತಬಿಂಬವಾಗಿದ್ದೇವೆ ಮತ್ತು ಭಗವಂತನ ಸ್ವರೂಪವೇ ಆಗಿದ್ದೇವೆ. ಅವನಲ್ಲಿ ಇರುವ ಎಲ್ಲಾ ಶಕ್ತಿ, ಚೈತನ್ಯ, ಜ್ಞಾನ, ಪ್ರಕಾಶ, ಪ್ರಜ್ಞೆ, ವ್ಯಕ್ತ, ಅವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳವಿಕೆ, ನಿರಾಕಾರ, ಸಾಕಾರ, ಸಗುಣ, ನಿರ್ಗುಣ, ನಿರಂಜನ, ರಸ, ಗಂಧ, ನಾಮಸ್ವರೂಪ, ನಿತ್ಯ, ಸತ್ಯ, ಅನಂತ, ಪ್ರೇಮಮಯ, ಕ್ಷಮಾಮಯ, ಸೃಷ್ಟಿ, ಸ್ಥಿತಿ, ಲಯ, ಅವಿನಾಶಿ ಮುಂತಾದವುಗಳು ನಮ್ಮ ಆಂತರ್ಯದಲ್ಲಿ ಅಸ್ತಿತ್ವದಲ್ಲಿವೆ. ಇವುಗಳು ಪ್ರಕೃತಿಯೊಂದಿಗೆ ಕೂಡಿದಾಗ ಭೌತಿಕವಾಗಿ ವ್ಯಕ್ತಗೊಳ್ಳತ್ತವೆ.

ಆದರೆ ಅವುಗಳ ಬಗ್ಗೆ ನಮಗೆ ಪರಿಪೂರ್ಣವಾದ ಅರಿವಿರುವುದಿಲ್ಲ. ಕಾರಣ ಪರಿಪೂರ್ಣ ಅಸ್ತಿತ್ವದಲ್ಲಿರುವ ಪ್ರಕೃತಿಯೊಂದಿಗೆ ನಮ್ಮ ಬೆಳವಣಿಗೆ ಆಗಿರುವುದಿಲ್ಲ. ಪ್ರಕೃತಿ ಯಾವಾಗಲೂ ಪೂರ್ಣಪ್ರಮಾಣದಲ್ಲಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಅದು ಪಂಚ ಮಹಾಭೂತಗಳಿಂದ, ಪಂಚ ಮಹಾಪ್ರಾಣಗಳಿಂದ, ಪಂಚ ಮಹಾಇಂದ್ರಿಯಗಳಿಂದ ಮತ್ತು ಸಂಬಂಧಪಟ್ಟ ಅಂಗಾಂಗ ಮತ್ತು ಗುಣಧರ್ಮಗಳಿಂದ ಕೂಡಿರುತ್ತದೆ. ಅದು ಬ್ರಹ್ಮಾಂಡವೇ ಆಗಿರುತ್ತದೆ. ಜೀವಾತ್ಮರು ವ್ಯಕ್ತ ಮತ್ತು ಅಭಿವ್ಯಕ್ಯಗೊಳ್ಳುವುದು ಈ ಪ್ರಕೃತಿಯ ಮೂಲಕವೆ.

ಈ ಆತ್ಮನು ಪ್ರಕೃತಿಯನ್ನು ಪ್ರವೇಶಿಸಿದ ಕೂಡಲೆ ಪ್ರಕೃತಿಯು ಜಾಗೃತಗೊಂಡು ಸ್ತುಪ್ತವಾಗಿರವ ಅಂಗಾಂಗ ಗಳನ್ನು ಜೀವಾತ್ಮರಲ್ಲಿ ಪ್ರಭಲವಾಗಿ ಸ್ತುಪ್ತವಾಗಿರುವ ಸಂಸ್ಕಾರಗಳ ಅನುಗುಣವಾಗಿ ಆಯಾ ಶರೀರಗಳನ್ನು ಧಾರಣೆಮಾಡಲು ಸಹಕರಿಸುತ್ತಾಳೆ ಮತ್ತು ಆಯಾ ಗುಣಧರ್ಮವನ್ನು ಪ್ರಕಟಗೊಳಿಸಿ ಸಹಕರಿಸುತ್ತಾಳೆ.

ಅಂದರೆ ಆತ್ಮದೃಷ್ಟರಾಗಿರವ ಜೀವಕೋಟಿಗಳು ತಮ್ಮಲ್ಲಿ ಅಡಕವಾಗಿರುವ ಮೂಲ ಚೈತನ್ಯ ಮತ್ತು ಪ್ರಜ್ಞೆಯ ಮೂಲಕ ಪ್ರಕೃತಿಯನ್ನು ಪ್ರಚೋದಿಸಿ ವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳತ್ತವೆ.

ಹಾಗದರೆ ಜೀವಾತ್ಮರು ಬ್ರಹ್ಮ ಸಮಾನರಾಗಿರತ್ತಾರೆ.
ಇದು ಅಹಂ ಬ್ರಹ್ಮಾಸ್ಮೀ ಎಂದೆನಿಸುತ್ತದೆ ಮತ್ತು
ಸರ್ವಂ ಕಲ್ವಿದಂ ಬ್ರಹ್ಮ ಎಂಬ ಉಕ್ತಿಗೆ ಪುಷ್ಟಿ ನೀಡುತ್ತದೆ.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ಯಜ್ಞದ ಮಹತ್ವ

Om Namo Naarayanaaya.

ಯಜ್ಞದ ಮಹತ್ವ ನನ್ನ ದೃಷ್ಟಿಯಲ್ಲಿ......‌‌....

ವೇದ ಮತ್ತು ಉಪನಿಷತ್ತುಗಳಲ್ಲಿ ತಿಳಿಸಿರುವ ಹಾಗೆ ಯಾಗ ಮತ್ತು ಯಜ್ಞಗಳನ್ನು ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಹೊಂದುವ ಸಂಕಲ್ಪದೂಂದಿಗೆ ಮಾಡಬೇಕು. ಅವುಗಳ ಮೂಲಕ ಆಯಾ ದೇವತೆಗಳನ್ನು ಪೂಜಿಸಿ ಮತ್ತು ಹವಿಸ್ಸುಗಳನ್ನು ಸಮರ್ಪಿಸಿ ಆಶೀರ್ವಾದವನ್ನು ಪಡೆದುಕೊಂಡು ಲೌಕಿಕ ಮತ್ತು ಪಾರಮಾರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕು.ಇಂತಹ ಯಜ್ಞ ಯಾಗಾದಿಗಳಿಂದ ಶರೀರ, ಮನಸ್ಸು, ಬುಧ್ದಿ, ಚಿತ್ತ, ಅಹಂಕಾರ, ಅಂತಃಕರಣಗಳು ಮತ್ತು ನಮ್ಮ ಸುತ್ತಲಿನ ಪರಿಸರ ಶುದ್ಧಗೊಂಡು ಮತ್ತು ಪುಷ್ಟಿ ಗೊಂಡು ಆರೋಗ್ಯದಿಂದ ಸಂಮೃದ್ದಿಯಿಂದ,ಆನಂದದಿಂದ, ಸಾಮರಸ್ಯದಿಂದ ಕೂಡಿದ ಜೀವನವನ್ನು ನಡೆಸಿ ಅಂತ್ಯದಲ್ಲಿ ನಮ್ಮ ಜೀವನದ ಪುಣ್ಯ ಫಲಗಳಿಗನುಗುಣವಾಗಿ ಆಯಾ ದೇವತೆಗಳ ಸಾನಿಧ್ಯವನ್ನು ಹೊಂದಬಹುದಾಗಿತ್ತು.

ಆದರೆ ಈಗಿನ ಆಧುನಿಕ ಪ್ರಪಂಚದಲ್ಲಿ ನಾವುಗಳು ಭೌತಿಕ ಇಚ್ಛೆಗಳನ್ನು ಪೂರೈಸಿಕೊಳ್ಳವ ಉದ್ದೇಶದಿಂದ ಹೋಮ ಹವನಾದಿಗಳನ್ನ ಆಚರಿಸಿಕೊಂಡು ಬಂದಿದ್ದೇವೆ. ಇದರಿಂದಾಗಿ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬರಲು ನಮಗೆ ಸಾಧ್ಯವಾಗುತ್ತಿಲ್ಲ.

ಆದರೆ, ಹಿಂದೆ ಋಷಿಗಳು, ಮುನಿಗಳು ವೇದಗಳಲ್ಲಿನ ಸತ್ಯವನ್ನು ಅರಿತ್ತಿದ್ದರು ಮತ್ತು ಅದರಂತೆ ನಿತ್ಯವೂ ಇಂತಹ ಹೋಮ ಹವನಾದಿಗಳನ್ನ ಆಚರಿಸಿ ಕೊಂಡು ಬರುತ್ತಿದ್ದರು ಮತ್ತು ಇಹದಲ್ಲಿ ಮತ್ತು ಪರದಲ್ಲಿ ಶ್ರೇಯಸ್ಸನ್ನು ಹೊಂದುತ್ತಿದ್ದರು.

ಅಂತಹ ಯಜ್ಞ ಮತ್ತು ಯಾಗಾದಿಗಳ ಸಾಲಿನಲ್ಲಿ ಇನ್ನೊಂದು ಮಹತ್ತರವಾದ ಯಜ್ಞವಿದೆ. ಈ ಯಜ್ಞವನ್ನು ನಾವು ಪ್ರತಿನಿತ್ಯವು ಮಡುತ್ತಿದ್ದೇವೆ. ಆದರೆ ಅದರ ಬಗ್ಗೆ ನಮಗರಿವಿಲ್ಲ. ಅದುವೇ ಅನ್ನ ಯಜ್ಞ.

ಇತರೆ ಭೌತಿಕ ಯಜ್ಞಗಳಲ್ಲಿ ಹವನ ಕುಂಡವನ್ನು ನಿರ್ಮಿಸಿ ಅಗ್ನಿ ದೇವನನ್ನು ಆವಾಹಸಿ, ಪ್ರತಿಷ್ಟಾಪಿಸಿ ಮತ್ತು ನಮಸ್ಕರಿಸಿ ಅವನ ಮುಖಾಂತರ ಆಯಾ ದೇವತೆಗಳಿಗೆ ಹವಿಸ್ಸುಗಳನ್ನು ಕೊಟ್ಟು ದೇವತೆಗಳನ್ನು ಸಂತುಷ್ಟಗೊಳಿಸಿ ಅವರ ಆಶೀರ್ವಾದದಿಂದ ಪುಷ್ಟಿಗೊಳ್ಳುತ್ತೇವೆ.

ಆದರೆ ಅನ್ನ ಯಜ್ಞದಲ್ಲಿ ನಮ್ಮ ದೇಹವೇ ಒಂದು ಯಜ್ಞಕುಂಡ, ಜಠರದಲ್ಲಿ ಪರಮಾತ್ಮನಿಂದ ಪ್ರತಿಷ್ಟಾಪಿಸಲ್ಪಟ್ಟಿರುವ ಅಗ್ನಿ ದೇವನ ಮುಖಾಂತರ ನಮ್ಮ ಆಂತರ್ಯದಲ್ಲಿ ನೆಲಸಿರುವ ಪರಂಬ್ರಹ್ಮನಿಗೆ ಅನ್ನವೆಂಬ ಹವಿಸ್ಸನ್ನು ಅರ್ಪಿಸಿ ಕೃತಾರ್ಥನಾಗಿ ಪುಷ್ಟಿಗೊಳ್ಳಬೇಕು. ಆದ್ದರಿಂದ ನಾವು ತಿನ್ನುವ ಅನ್ನ, ಆಹಾರ, ಜಲ ಪಾನಾದಿಗಳನ್ನು ಸಂಕಲ್ಪ ಶಕ್ತಿಯಿಂದ ಶುದ್ಧಗೊಳಿಸಿ ಬಹಳ ಶ್ರಧ್ಧೆ ಮತ್ತು ಭಕ್ತಿಯಿಂದ ಹವಿಸ್ಸಿನ ರೂಪದಲ್ಲಿ ನಮ್ಮ ಆಂತರ್ಯದಲ್ಲಿ ನೆಲಸಿರುವ ಪರಮೇಶ್ವರನಿಗೆ ಸಮರ್ಪಿಸಿ ಕೃತಾರ್ಥರಾಗಿ ಪುಷ್ಟಿಗೊಂಡು ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಹೊಂದಬೇಕು. ಆವಾಗ ಅನ್ನವು ಬ್ರಹ್ಮಸ್ವರೂಪವನ್ನು ಪಡೆದುಕೊಳ್ಳುತ್ತದೆ ಆಂದರೆ ಅನ್ನಂ ಬ್ರಹ್ಮೇತಿ ವ್ಯಜಾನಾಥ್ ಎಂದು ಅರ್ಥೈಸುವುದು.

Brihatmann - The way for realization


ಭಗವದ್ಗೀತೆಯ ಜ್ಞಾನಯೋಗದಲ್ಲಿ - 18ನೇ ಶ್ಲೋಕದ ಅರ್ಥ

Om Namo Naarayanaaya

ಭಗವದ್ಗೀತೆಯ ಜ್ಞಾನಯೋಗದಲ್ಲಿ - 18ನೇ ಶ್ಲೋಕದ ಅರ್ಥ ನನ್ನ ದೃಷ್ಟಿಕೋನದಲ್ಲಿ..........

ಕರ್ಮದಲ್ಲಿ ಅಕರ್ಮವನ್ನು ಮತ್ತು ಅಕರ್ಮದಲ್ಲಿ ಕರ್ಮವನ್ನು ನೋಡುವವನು ಶ್ರೇಷ್ಠನೆಂದು ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿದ್ದಾನೆ.

ಹಾಗಾದರೆ ಕರ್ಮದಲ್ಲಿ ಅಕರ್ಮವನ್ನು ನೋಡುವುದು ಹೇಗೆ.
ಮೊದಲು ಕರ್ಮ ಎಂದರೇನು ಎಂದು ತಿಳಿದುಕೊಳ್ಳೋಣ.
ಉದಾಹರಣೆಗೆ ಯಾವುದೇ ರೀತಿಯ ಭೌತಿಕ, ಮಾನಸಿಕ, ಆಂತರಿಕ, ಭಾವನಾತ್ಮಕ ಸೃಷ್ಟಿ, ಸ್ಥಿತಿ, ಲಯ ಮತ್ತು ಆಧ್ಯಾತ್ಮಿಕ ಕೆಲಸಗಳನ್ನು ಕರ್ಮವೆಂದು ಕರೆಯಬಹುದು.

ಹಾಗಾದರೆ ಯಾವುದೇ ಕೆಲಸವನ್ನಾಗಲಿ ಮತ್ತು ವಸ್ತುಗಳನ್ನು ಮಾಡಬೇಕಾದರೆ ಅದಕ್ಕೆ ಒಬ್ಬ ಕರ್ತೃ ಇರಬೇಕಲ್ಲವೆ. ಹೌದು ಇರಲೇಬೇಕು.

ಮತ್ತೊಂದು ಉಧಾಹರಣೆಯನ್ನು ನೋಡೋಣ ನಮ್ಮ ಶರೀರವನ್ನು ಮಾಡಿದವರು ಯಾರು. ನಮ್ಮನ್ನು ನಮ್ಮ ತಾಯಿಯ ಹೊಟ್ಟೆಯಲ್ಲಿದ್ದಾಗ ನಮ್ಮ ತಲೆ, ಕಣ್ಣು, ಕಿವಿ, ಮೂಗು, ಬಾಯಿ, ನಾಲಿಗೆ, ಮೆದುಳು, ಹೃದಯ, ಹೊಟ್ಟೆ, ಜನನೇಂದ್ರಿಯ, ಕೈ, ಕಾಲು, ಬೆನ್ನೆಲುಬು ಮತ್ತು ಇತರೆ ಅಂಗಾಗಗಳನ್ನು ಮಾಡಿದವರು ಯಾರು.

ಆಯಿತು ಇನ್ನೊಂದು ಆಯಾಮವನ್ನು ನೋಡೋಣ
ನಾನು ಎಂದು ಹೇಳಿಕೊಳ್ಳುವ ನಮಗೆ ನಮಗರಿವಿಲ್ಲದಯೆ
ನಮ್ಮ ಹೃದಯ ಕೆಲಸಮಾಡುತ್ತಿದೆ ಹಾಗಾದರೆ ಅದು ಹೇಗೆ ಸಾಧ್ಯ. ನಾವು ತಿಂದ ಆಹಾರವು ನಮ್ಮ ಜಠರದಲ್ಲಿ ಜೀರ್ಣವಾಗಿ ರಕ್ತವಾಗುತ್ತಿರುವುದು ಹೇಗೆ. ನಮ್ಮ ಕೂದಲು, ಉಗುರು, ಮೂಳೆಗಳು ಬೆಳೆಯುತ್ತಿರುವುದು ಹೇಗೆ. ನಮ್ಮ ರಕ್ತದಲ್ಲಿ ಲವಣಾಂಶಗಳು ಉತ್ಪತ್ತಿಯಾಗುತ್ತಿರುವುದು ಹೇಗೆ.
ನಮ್ಮ ಉಸಿರಾಟದ ಕ್ರಿಯೆ, ಮಲವಿಸರ್ಜನೆ ಕ್ರಿಯೆಗಳು ನಡೆಯುತ್ತಿರವುದಾದರು ಹೇಗೆ.

ಆಯಿತು, ಇನ್ನೊಂದು ಅಂಶವನ್ನು ಗಮನಿಸೋಣ ನಮ್ಮ ಹುಟ್ಟು, ಬಾಲ್ಯ, ಯವೌನ, ವಾರ್ಧಿಕ್ಯ, ಮುಪ್ಪು ಮತ್ತು ಸಾವಿನ ಅವಸ್ಥೆಗಳು ನಮಗರಿವಿಲ್ಲದಯೆ ನಡೆಯುತ್ತಿರುವ ಕೆಲಸಗಳಾಗಿವೆ ಅವುಗಳ ಮೇಲೆ ನಮಗೆ ಯಾವುದೇ ನಿಯಂತ್ರಣವಿರವುದಿಲ್ಲ ಹಾಗಾದರೆ ಇದು ಹೇಗೆ ಸಾಧ್ಯ ಮತ್ತು ಯಾರಿಂದ ನಿಯಂತ್ರಿಸಲ್ಪಡುತ್ತಿದೆ ಮತ್ತು ಮಾಡಲ್ಪಡುತ್ತಿದೆ

ಹಾಗಾದರೆ ಮತ್ತೊಂದು ಆಂಶವನ್ನು ಗಮನಿಸೋಣ, ನಮ್ಮ ಈ ಶರೀರ ಮತ್ತು ಅಂಗಾಂಗಗಳು, ಮನ‌ಸ್ಸು, ಬುಧ್ಧಿ, ಚಿತ್ತ, ಅಹಂಕಾರ,ಭಾವನೆಗಳು ಮತ್ತು ಅಂತಃಕರಣಗಳು ನಮ್ಮನ್ನು ಅಂದರೆ ಜೀವಾತ್ಮರಾದ ನಮ್ಮನ್ನು ಆಯಾ ಶರೀರದಲ್ಲಿ ಇಟ್ಟಾಗ ಮಾತ್ರ ಕಾರ್ಯನಿರ್ವಹಿಸುತ್ತವೆ ಮತ್ತು ನಾವುಗಳು ನಾನು ಎಂದು ಪೃಭೋದಿಸುತ್ತೇವೆ. ಆದರೆ ಅದೇ ಜೀವಾತ್ಮನನ್ನು ಶರೀರದಿಂದ ಹೊರತಂದಾಗ ನಮ್ಮ ಶರೀವು ನಿಶ್ಕ್ರಿಯೆಗೊಳ್ಳುತ್ತದೆ ಮತ್ತು ಕೊಳಯಲಾರಂಬಿಸುತ್ತದೆ. ಅಲ್ಲಿ ನಾನು ಎಂದು ಕರೆಯುವ ಜೀವಾತ್ಮನಿರುವುದಿಲ್ಲ. ಹಾಗಾದರೆ ಇದು ಹೇಗೆ ಸಾಧ್ಯ. ನಮ್ಮನ್ನು ಮತ್ತೆ ಈ ಶರೀರದಲ್ಲಿಟ್ಟಾಗ ನಮ್ಮ ಎಲ್ಲಾ ಅಂಗಾಂಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ನಾವುಗಳು ನಾನು ಎಂದು ಬೀಗತ್ತೇವೆ.

ಈ ಹಂತದಲ್ಲಿ ನಮ್ಮೆಲ್ಲರಿಗೂ ಒಂದು ಸೂಕ್ಷ್ಮವಾದ ವಿಚಾರ ತಿಳಿಯಲೇಬೇಕಾದ ಅವಶ್ಯಕತೆ ಇದೆ ಅದು ಏನೆಂದರೆ ನಮ್ಮೊಳಗಡೆ ಅಂದರೆ ಪ್ರತಿಯೊಬ್ಬ ಜೀವಾತ್ಮನ ಒಳಗಡೆ ಅಗೋಚರನು, ಅನಂತನು, ಸೂಕ್ಷ್ಮನು, ಚೈತನ್ಯಮಯನು,ಪ್ರಾಣಮಯನು,ಪ್ರಕಾಶಮಯನು,ಜ್ಞಾನಮಯನು, ಕ್ಷಮಾಮಯನು,ಸಾಕ್ಷೀಭೂತನು ಮತ್ತು ಸೃಷ್ಟಿ, ಸ್ಥಿತಿ, ಲಯಕಾರನು ನೆಲೆಸಿರುವುದರಿಂದ ನಾವುಗಳು ಮತ್ತು ಸಮಸ್ತ ನಭೋಮಂಡಲಗಳು ವ್ಯಕ್ತ ಮತ್ತು ಅಭಿವ್ಯಕ್ತಗೊಂಡಿವೆ.

ಅಂದರೆ ನಾವುಗಳು ಮಾಡುವ ಮತ್ತು ಮಾಡುತ್ತಿರುವ ಎಲ್ಲಾ ಕರ್ಮಗಳಿಗೆ ಮತ್ತು ಕೈಕಂರ್ಯಗಳಿಗೆ ಆ ಪರಂಬ್ರಹ್ಮನೇ ಕಾರಣನಾಗಿದ್ದು ಮತ್ತು ಆ ದೃಷ್ಟಿಕೋನದಿಂದ ನಮ್ಮೆಲ್ಲ ಕೈಂಕರ್ಯಗಳನ್ನು ಪರಂಬ್ರಹ್ಮನಿಗೆ ಅರ್ಪಿಸಿದಾಗ ಕರ್ಮವು ಅಕರ್ಮವಾಗಿ ಮತ್ತು ಅಕರ್ಮವು ಕರ್ಮವಾಗಿ ಪರಿಣಮಿಸುವುದು ಮತ್ತು ಅಂತಹ ಮನಸ್ಥಿತಿಯಿಂದ ಮಾಡಿದ ಕೈಂಕರ್ಯಗಳೆಲ್ಲವೂ ಅಭಾದಿತವಾಗವುದು ಮತ್ತು ಫಲದಾಯಕವಾಗುವುದು ಮತ್ತು ನಮಗೆ ಯಾವ ದೋಷವು ತಟ್ಟದು.

ಶ್ರೀಹರಿಯು ನಮ್ಮೆಲ್ಲರಿಗೂ ಈ ಅರಿವನ್ನು ಮೂಡಿಸಿ ಆ ಗುಂಟ ನಮ್ಮನ್ನು ಮುನ್ನಡೆಸಿ ಶ್ರೇಯಸ್ಸನ್ನು ಕರುಣಿಸಲಿ.

ಈ ವಿಚಾರವು ನಿಮಗೆ ಸರಿ ಅನಿಸಿದ ಪಕ್ಷದಲ್ಲಿ ದಯವಿಟ್ಟು ಎಲ್ಲರಿಗೂ ತಲುಪಿಸಿ ಅವರ ಜೀವನದ ಉನ್ನತಿಗೆ ನೀವೂ ಕಾರಣೀಭೂತರಾಗಿರಿ.

Brihatnann - The way for realization


ನಮೋಸ್ತು ಅನಂತಾಯ ಸಹಸ್ರಮೂರ್ತಯೆ...

Om Namo Naaraayanaya.

ನಮೋಸ್ತು ಅನಂತಾಯ ಸಹಸ್ರಮೂರ್ತಯೆ ಸಹಸ್ರಪಾದಾಕ್ಷಿ ಶಿರೋರುಬಾಹವೆ ಸಹಸ್ರನಾಮ್ನೆ ಪುರುಷಾಯ ಶಾಶ್ವತೆ ಸಹಸ್ರಕೋಟಿ ಯುಗಧಾರಿಣೀ ನಮಃ

ಇದರ ಅರ್ಥ ಹೀಗಿದೆ ನನ್ನ ದೃಷ್ಟಿಯಲ್ಲಿ .....................

ಯಾರಿಂದ ಎಲ್ಲವು ವ್ಯಾಪಿಸಲ್ಪಟ್ಟಿದಿಯೊ
ಯಾರಿಂದ ಎಲ್ಲವು ತುಂಬಲ್ಪಟ್ಟಿದಿಯೊ
ಯಾರಿಂದ ಎಲ್ಲವು ಬೆಳಗಲ್ಪಟ್ಟಿದಿಯೊ
ಯಾರಿಗೆ ಮೊದಲು ಮತ್ತು ಕೊನೆಯಂಬುದಿಲ್ಲವೊ
ಯಾರು ಅವಿನಾಶಿಯೊ
ಯಾರ ಅಸ್ತಿತ್ವದಿಂದ ಎಲ್ಲವು ಅಸ್ತಿತ್ವದಲ್ಲಿದಿಯೊ

ಯಾರು ಅನಂತ ಸ್ವರೂಪಗಳಲ್ಲಿ ವ್ಯಕ್ತನಾಗಿದ್ದಾನೊ ಅಂದರೆ ದೇವ, ಮನುಷ್ಯ, ಪ್ರಾಣಿ, ಪಕ್ಷಿ, ಮೃಗ, ಮತ್ಸ್ಯ, ಸರೀಸೃಪ, ಕ್ರಿಮಿ, ಕೀಟ, ವೃಕ್ಷ,, ಜಲ, ಪೃಥ್ವಿ, ವಾಯು, ಅಗ್ನಿ, ಆಕಾಶ, ಎಲ್ಲಾ ಗ್ರಹಗಳ, ನಕ್ಷತ್ರಾದಿ ನಭೋಮಂಡಲಗಳ ಮತ್ತು ಅನೇಕ ಸ್ವರೂಪಗಳಲ್ಲಿ ಅಭಿವ್ಯಕ್ತನಾಗಿದ್ಧಾನೊ,ಅನಂತ ಹೆಸರುಗಳಿಂದ ಗುರುತಿಸಲ್ಪಟ್ಟು ಸ್ತುತಿಸಲ್ಪಟ್ಟಿದ್ದಾನೊ, ಎಲ್ಲಾ ದಿಕ್ಕುಗಳನ್ನು ವ್ಯಾಪಿಸಿಕೂಂಡಿದ್ದಾನೊ ಮತ್ತು ಯಾರು ಎಲ್ಲದರ ಒಳಗು ಹೊರಗು ತುಂಬಿಕೊಂಡು ಅನಂತದವರೆಗು ಅಸ್ತಿತ್ವದಲ್ಲಿರುತ್ತಾನೊ ಅಂತಹ ಪರಮೇಶ್ವರನನ್ನು ‌ಸ್ತುತಿಸುತ್ತೇನೆ

ಆ ಪರಮೇಶ್ವರನು ನಮಗೆ ಶ್ರೇಯಸ್ಸನ್ನು ಕರುಣಿಸಲಿ

Brihatmann - The way for realization


Gayatri Mantra

Om Namo Naaraayanaaya.

ಗಾಯತ್ರೀ ಮಂತ್ರದ ಅರ್ಥ ನನ್ನ ದೃಷ್ಟಿಯಲ್ಲಿ

‌ಯಾರಿಂದ ಎಲ್ಲವೂ ವ್ಯಾಪಿಸಲ್ಪಟ್ಟಿದಿಯೊ,
‌ಯಾರಿಂದ ಎಲ್ಲವೂ ತುಂಬಲ್ಪಟ್ಟಿದಿಯೊ
‌ಯಾರಿಂದ ಸೂರ್ಯ ಚಂದ್ರಾದಿಗಳು, ನಕ್ಷತ್ರಾದಿ ನಭೋಮಂಡಲಗಳು ಪ್ರಕಾಶಿಸಲ್ಪಟ್ಟಿದಿಯೊ
‌ಯಾರಿಂದ ಎಲ್ಲದರ ಸೃಷ್ಟಿ ಸ್ತಿತಿ ಲಯಗಳಾಗಲ್ಪಟ್ಟಿದಿಯೊ
‌ಯಾವುದು ಎಲ್ಲದಕ್ಕೂ ಆಧಾರವಾಗಿದಿಯೊ
‌ಯಾರಲ್ಲಿ ಎಲ್ಲವು ಅಡಕವಾಗಿದಿಯೊ
‌ಯಾರ ಆಜ್ಞೆಯಂತೆ ಅಷ್ಟದಿಕ್ಫಾಲಕರು, ನವಗ್ರಹ ದೇವತೆಗಳು, ದೇವಾನು ದೇವತೆಗಳು, ಪಂಚ ಮಹಾಭೂತಗಳು, ಪಂಚ ಮಹಾಪ್ರಾಣಗಳು, ಪಂಚ ಮಹಾಇಂದ್ರಿಯಗಳು ಕಾರ್ಯ ನಿರ್ವಹಿಸುತ್ತಿದ್ದಾರೊ
ಅಂತಹ ಪರಂಬ್ರಹ್ಮನನ್ನು, ಪರಂಜ್ಯೋತಿಯನ್ನು, ಪರಮೇಶ್ವರನನ್ನು ನನ್ನ ಆಂತರ್ಯದಲ್ಲಿ ಧ್ಯಾನಿಸುತ್ತೇನೆ. ಅವನು ನನ್ನ ಮನಸ್ಸನ್ನ ,ಬುದ್ಧಿಯನ್ನ, ಚಿತ್ತವನ್ನ, ಅಂತರಂಗವನ್ನು ಬೆಳಗಿಸಿ ನಿತ್ಯನು, ಸತ್ಯನು, ಅನಂತನು ಆಗಿರುವ ಅವನೆಡೆಗೆ ನಡೆಯುವಂತೆ ನನ್ನನ್ನು ಪ್ರೇರೇಪಿಸಲಿ ಮತ್ತು ಪ್ರಚೋದಿಸಲಿ.

Brihatmann - The way for realization.