Brihatmann | Divine Thoughts

DIVINE THOUGHTS

GURU

Om Namo Naaraayanaaya.

Finding the true spiritual seeker and the true Elevated, Selfless Realized GURU is very very difficult.

Such an elevated and realized GURU belongs to the entire Universe and he never restricts himself to any Sect, Religion, Cast, Creed, Nationality or any Organizations etc.

He is the Universe. He is an Unconditional Love. He is the Forgiveness. He is the Solace. He is the Peace.

He directs, assists, guides the derailed and distorted souls to realize their Inner Self by turning their extroverted and external mind in to their Inner Self who exists in the deep core of their existence as the Divine Light or the Life force.

During this process, every aspirant or the spiritual seeker gets connected with his/her Inner Self and start evolving with ease. Once the connection is established with the Inner Self, the seekers starts getting the guidance from the Inner Self till the merging happens with Inner Self

Brihatmann - The way for realization


‌Meditation

Om Namo Naaraayanaaya.

Inner self does not belong to any Religion, Cast, Creed, Nationality, Colour, Race etc. But it is an Universal existence. It resides in the core of every existence.

‌Meditation gives us the opportunity to know our inner self and our inner dimensions.

‌Meditation establishes the unbreakable bondage with our inner self.

‌Meditation creates the dependency on our inner self.

‌Meditation gives us the opportunity to know and align with the Universal Life force exists in the diversity of life.

‌Meditation connects us with the cosmic world.
‌Meditation cleans the mind and brings about the clarity in our thought process and holistic change in our life.

‌Meditation makes oneself free from all kinds of fears.

‌Meditation develops the patience and peace within us.

‌Meditation develops an Unconditional love.

‌Meditation develops the kindness and forgiveness.

‌Meditation develops the endurance.

‌Meditation dispels the disparity.

‌Meditation creates abundance.

Brihatmann - The way for realization.


ಘನ ಶಾಮ ಸುಂದರ ಶ್ರೀಧರ ಏಳಯ್ಯ ಬೆಳಗಾಯಿತು

Om Namo Naaraayanaaya

ಘನ ಶಾಮ ಸುಂದರ ಶ್ರೀಧರ ಏಳಯ್ಯ ಬೆಳಗಾಯಿತು

ಗಂಗೆಯು ಬಂದಿಹಳು ನಿನ್ನ ಪಾದ ಕಮಲಗಳ ತೊಳೆಯಲೆಂದು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಮೂಡಣದಲಿ ಸೂರ್ಯನಾರಾಯಣನು ಮೂಡಿಹನು ನಿನ್ನ ಪಾದ ಸ್ಪರ್ಶಿಸಲು ಏಳಯ್ಯ ಬೆಳಗಾಯಿತು
ಘನ ಶಾಮ ಸುಂದರ ಶ್ರೀಧರ.

ವಾಯು ದೇವನು ನಿಂದಿಹನು ನಿನಗೆ ಚಾಮರ ಸೇವೆಗಯ್ಯಲು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಅಗ್ನಿದೇವನು ಬಂದಿಹನು ನಿನಗೆ ದೃಷ್ಟಿ ಪರಿಹರಿಸಲು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಆಕಾಶ ದೇವತೆಗಳು ಕಾದಿಹರು ನಿನಗೆ ಪುಷ್ಪ ವೃಷ್ಟಿಗಯ್ಯಲು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಬ್ರಹ್ಮಾದಿದೇವತೆಗಳು ನಿನ್ನ ದರುಶನಕೆ ಕಾದಿಹರು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಸಿರಿದೇವಿ ಭೂದೇವಿಯರು ನಿನ್ನ ಪಾದ ಸೇವೆಗಯ್ಯುತಿಹರು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಆದಿಶೇಷನು ಅಲುಗಾಡದಿಹನು ನಿನ್ನ ನಿದ್ರೆಗೆ ಭಂಗ ಬಹುದೆಂದು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ನಾರದಾದಿ ಮುನಿವಂದ್ಯರೆಲ್ಲರು ನಿನ್ನ ಸ್ತುತಿಸುತಿಹರು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಗರುಡ ಹನುಮಾದಿಗಳು ಕಾದಿಹರು ಕಾತುರದಿ ನಿನ್ನ ಸೇವೆಗಯ್ಯಲು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ .

ಋಷಿಗಳೆಲ್ಲರು ವೇದ ಪಠಿಸುತಿಹರು ನಿನ್ನ ಸ್ತುತಿಸುತಿಹರು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ದೇವಗೋವುಳೆಲ್ಲವು ಕಾದಿಹವು ನಿನಗೆ ಕ್ಷೀರಾಭಿಷೇಕವಗಯ್ಯಲು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ವೇದಘೋಷಗಳಿಂದ ಋತ್ವಿಕರು ಕಾದಿಹರು ಕಾತುರದಿ ನಿನ್ನ ದರುಶನಕೆ ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

ಭಕ್ತಿ ಅಬ್ಧಿಯಲಿ ಮುಳುಗಿ ಹೃದ್ಮನಗಳೆಲ್ಲವ ಮಾಗಿಸಿ ಕಾದಿಹರು ನಿನ್ನ ದರುಶನಕೆ ಭಕ್ತವೃಂದರು ಏಳಯ್ಯ ಬೆಳಗಾಯಿತು.
ಘನ ಶಾಮ ಸುಂದರ ಶ್ರೀಧರ.

Brihatmann - The way for realization


ಪರಂಬ್ರಹ್ಮ

Om Namo Naaraayanaaya

ಯಾರು ಪರಂಬ್ರಹನನ್ನು ನಿತ್ಯನು, ಸತ್ಯನು, ಅನಂತನು, ಸರ್ವಜ್ಞನೆಂದು, ಸರ್ವವ್ಯಾಪಕನೆಂದು, ಸರ್ವಶಕ್ತನೆಂದು ಮತ್ತು ಸರ್ವಾಂತರ್ಯಾಮಿಯೆಂದು ತಿಳಿದಿರುತ್ತಾರೊ ಅಂತಃ ಜೀವಾತ್ಮರು ಎಲ್ಲದರಲ್ಲೂ ಮತ್ತು ಎಲ್ಲರ ಅಂತಃರಂಗದಲ್ಲಿ ಆ ಪರಂಬ್ರಹನನ್ನು ಕಾಣುತ್ತಾರೆ ಮತ್ತು ಗೌರವಿಸುತ್ತಾರೆ.

ಅಂತಃ ಮಹಾನುಭಾವರು ಯಾವುದೇ ವ್ಯಕ್ತಿಯನ್ನಾಗಲಿ, ಪಂಥವನ್ನಾಗಲಿ ಅಥವ ಮತಗಳನ್ನಾಗಲಿ ನಿಕೃಷ್ಟವಾಗಿ ಕಾಣುವುದಿಲ್ಲ ಬದಲಾಗಿ ಎಲ್ಲದರಲ್ಲೂ ಅಡಕವಾಗಿರುವ ಸತ್ಯವನ್ನು ಹೆಕ್ಕಿ, ಸ್ವೀಕರಿಸಿ ಮತ್ತು ಅಳವಡಿಸಿಕೊಂಡು ಆತ್ಮೋದ್ಧಾರದ ಪಥದಲ್ಲಿ ಮುನ್ನುಡೆದು ಆಂತ್ಯದಲ್ಲಿ ಪರಂಧಾಮವನ್ನು ಹೊಂದುತ್ತಾರೆ.

Brihatmann - The way for realization


ಬ್ರಾಹ್ಮಣ್ಯ......‌‌‌....

Om Namo Naaraayanaaya

ಮೊದಲು ಬ್ರಾಹ್ಮಣರು ಕಡೇಪಕ್ಷ ಗಾಯತ್ರಿ ಜಪವನ್ನು ಬಹಳ ಶ್ರದ್ಧೆಯಿಂದ ಮಾಡುವಂತವರಾಗಬೇಕು. ಆವಾಗ ಆತ್ಮ ಸ್ಥೈರ್ಯ ಉಂಟಾಗುತ್ತದೆ ಮತ್ತು ಎಲ್ಲವನ್ನು ಎದುರಿಸಿ ಮೆಟ್ಟಿನಿಲ್ಲುವ ಶಕ್ತಿ ವೃದ್ಧಿಸುತ್ತದೆ.

ಬ್ರಾಹ್ಮಣ್ಯಕ್ಕೆ ವಿರುದ್ಧವಾದ ಕೆಲಸಗಳನ್ನು ಎಷ್ಟೋ ಬ್ರಾಹ್ಮಣ ಕುಟುಂಬದ ಮಕ್ಕಳು ಮಾಂಸ ಮತ್ತು ಮಧ್ಯವನ್ನು ಸೇವಿಸುತ್ತಿದ್ದಾರೆ ಮತ್ತು ವರ್ಣಸಂಕ್ರಮಣಕ್ಕೆ ತುತ್ತಾಗಿದ್ದಾರೆ ಮತ್ತು ತುತ್ತಾಗುತ್ತಿದ್ದಾರೆ. ಇದರಿಂದಾಗಿ ಬ್ರಾಹ್ಮಣ ಕುಲ ಅಪಹಾಸ್ಯಕ್ಕೆ ತುತ್ತಾಗಿರುವುದು ಬಹಳ ಶೋಚನೀಯ ವಿಚಾರವಾಗಿದೆ.

ಕೇವಲ ಜನಿವಾರವನ್ನು ದರಿಸುವುದರಿಂದ ನಾವು ಬ್ರಾಹ್ಮಣರಾಗವುದಿಲ್ಲ ಮತ್ತು ಬ್ರಾಹ್ಮಣ್ಯ ಪದವಿ ಸಿಗುವುದಿಲ್ಲ. ಅದು ಅಷ್ಟೊಂದು ಸುಲಭದ ವಿಚಾರವೂ ಅಲ್ಲ.

ಬ್ರಾಹ್ಮಣ ಕುಲದಲ್ಲಿ ಹುಟ್ಟುವುದೇ ಒಂದು ಸುಕೃತ. ಈ ಸೌಭಾಗ್ಯ ಎಲ್ಲರಿಗೂ ಲಭಿಸುವುದಿಲ್ಲ. ಕೆಲವರು ಈ ಸೌಭಾಗ್ಯವನ್ನು ಸದುಪಯೋಗ ಪಡಿಸಿಕೊಂಡು ಬ್ರಾಹ್ಮಣ್ಯದ ಹಾದಿಯಲ್ಲಿ ಮುನ್ನಡೆದು ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಹೊಂದುತ್ತಾರೆ.

ಆದರೆ ಈಗಿನ ಪ್ರಸ್ತುತ ವಿದ್ಯಮಾನದಲ್ಲಿ ಬ್ರಾಹ್ಮಣ್ಯಕ್ಕೆ ಅಪಚಾರವಾಗುತ್ತಿರುವುದರಿಂದ ಬ್ರಾಹ್ಮಣ ಕುಲ ವಿನಾಶದ ಅಂಚಿಗೆ ಸರಿಯುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ

ಮುಂದೊಂದು ದಿವಸ ಬ್ರಾಹ್ಮಣ ಕುಲವಿತ್ತೆಂದು ಚರಿತ್ರೆಯ ಪುಟದಲ್ಲಿ ಓದುವ ಸಂದರ್ಭ ಬಂದರೂ ಬರಬಹುದು.

ಇದಕ್ಕೆಲ್ಲ ನಾವೇ ಕಾರಣರು.

ಒಮ್ಮೆ ಆತ್ಮಾವಲೋಕನ ಮಾಡಿನೋಡಿ. ಈ ವಿಷಯ ಸರಿಯೆನಿಸಿದಲ್ಲಿ ಕಾರ್ಯ ತತ್ಪರರಾಗಿ ಬ್ರಾಹ್ಮಣ್ಯದ ಹಾದಿಯಲ್ಲಿ ನಡೆದು ಲೋಕಕಲ್ಯಾಣದ ಕೆಲಸದಲ್ಲಿ ತೊಡಗಿಸಿಕೊಂಡು ಕುಲವನ್ನು ಉದ್ದರಿಸುವ.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ ಅರ್ಥ

Om Namo Naaraayanaaya

ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ
ಶಿವಶ್ಚ ಹೃದಯಂ ವಿಷ್ಣು ವಿಷ್ಣೋಶ್ಚ ಹೃದಯಂ ಶಿವಃ
ಯಥಾ ಶಿವಮಯೋ ವಿಷ್ಣುಃ ಏವಂವಿಷ್ಣು ಮಯಶ್ಶಿವಃ
ಯಥಾನ್ತರಂ ನ ಪಶ್ಶಾಮಿ ತಥಾಮೇ ಸ್ವಸ್ತಿರಾಯುಷಿ
ಶ್ರೀ ತಥಾಮೇ ಸ್ವಸ್ತಿರಾಯುಷಿತ್ಯೋಂ ನಮಃ ಇತಿ

ಇದರ ಅರ್ಥ ಈ ರೀತಿ ಇದೆ .........

ಶ್ರೀ ವಿಷ್ಣುವಿನ ರೂಪದಲ್ಲಿ ಶಿವನಿದ್ದಾನೆ ಶ್ರೀ ಶಿವನ ರೂಪದಲ್ಲಿ ವಿಷ್ಣುವಿದ್ದಾನೆ - ಶಿವನೇ ವಿಷ್ಣುಃ ವಿಷ್ಣುವೇ ಶಿವಃ

ಶಿವನ ಹೃದಯದಲ್ಲಿ ವಿಷ್ಣು ನೆಲೆಸಿದ್ದಾನೆ ವಿಷ್ಣುವಿನ ಹೃದಯದಲ್ಲಿ ಶಿವ ನೆಲಸಿದ್ದಾನೆ

ಯಾವುದು ಶಿವಮಯವಾಗಿದೆಯೋ ಅದು ವಿಷ್ಣುವಿನಿಂದ ತುಂಬಲ್ಪಟ್ಟಿದೆ ಯಾವುದು ವಿಷ್ಣುಮಯವಾಗಿದೆಯೋ ಅದು ಶಿವನಿಂದ ತುಂಬಲ್ಪಟ್ಟಿದೆ

ಶಿವ ಬೇರೆಯಲ್ಲ ವಿಷ್ಣು ಬೇರೆಯಲ್ಲ ಶಿವ ಶಕ್ತಿ ಮತ್ತು ವಿಷ್ಣು ಶಕ್ತಿ ಗಳೆರಡೂ ಒಂದೇ ಪರಂಬ್ರಹ್ಮವಾಗಿದೆ ಎಂದು ತಿಳಿದಾಗ ಎಲ್ಲವೂ ಶುಭವಾಗುವುದು.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ದಿಗ್ದೇವತಾನಮಸ್ಕಾರದ ಮಹತ್ವ

Om Namo Naaraayanaaya

ಓಂ ನಮೋ ಪ್ರಾಚ್ಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ದಕ್ಷಿಣಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಪ್ರತೀಚ್ಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಉದೀಚ್ಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಊರ್ಧ್ವಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಅಧರಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ
ಓಂ ನಮೋ ಅವಾಂತರಾಯೈದಿಶೇ ಯಾಶ್ಚದೇವತಾಃ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮಃ

ಯಾವ ದೇವನಿಂದ ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ದಿಕ್ಕು ಗಳು, ಊರ್ದ್ವ ಮತ್ತು ಅಧೋ ಲೋಕಗಳು ಮತ್ತು ಸಮಸ್ತವು ವ್ಯಾಪಿಸಲ್ಪಟ್ಟಿದಿಯೊ, ತುಂಬಲ್ಪಟ್ಟಿದಿಯೊ ಮತ್ತು ಪೋಷಿಸಲ್ಪಟ್ಟಿದಿಯೊ ಅಂತಹ ಪರಂಬ್ರಹ್ಮನಿಗೆ ನನ್ನ ನಮಸ್ಕಾರಗಳು.

ಯಾವ ದೇವನು ನಮ್ಮನ್ನು ಆಪಾದಮಸ್ತಕವಾಗಿ ಆಂತರ್ಯದಲ್ಲಿ ವ್ಯಾಪಿಸಿಕೊಂಡಿದ್ದಾನೊ ಮತ್ತು ಪೋಷಿಸುತ್ತಿದ್ದಾನೊ ಅಂತಹ ಪರಂಬ್ರಹ್ಮನಿಗೆ ನನ್ನ ನಮಸ್ಕಾರಗಳು

ಯಾವ ದೇವನು ನಮ್ಮಲ್ಲಿ ಆಪಾದಮಸ್ತಕವಾಗಿ ವ್ಯಾಪಿಸಿರುವ ಎಲ್ಲಾ ದಿಕ್ಕುಗಳು ಮತ್ತು ಹದಿನಾಲ್ಕು ಲೋಕಗಳನ್ನು ವ್ಯಾಪಿಸಿಕೊಂಡು ಸಮಸ್ತ ಜೀವಾತ್ಮರನ್ನು ಮತ್ತು ದೇವತೆಗಳನ್ನು ಪೋಷಿಸುತ್ತಿದ್ದಾನೊ ಅಂತಹ ಪರಂಬ್ರಹ್ಮನಿಗೆ ನನ್ನ ನಮಸ್ಕಾರಗಳು

ಅಂತಹ ಪರಂಬ್ರಹ್ಮನು ನಮಗೆ ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಕರುಣಿಸಲಿ

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ಪರಂಬ್ರಹ್ಮ

Om Namo Naarayanaaya

ಇಡೀ ವಿಶ್ವವನ್ನು ವ್ಯಾಪಿಸಿರುವ ಪರಂಬ್ರಹ್ಮನು ಎಲ್ಲದರ ಒಳಗು ಮತ್ತು ಹೊರಗು ತುಂಬಿಕೊಂಡು ತನ್ನನ್ನು ನಾನಾ ರೂಪಗಳಲ್ಲಿ, ಗುಣಗಳಲ್ಲಿ, ಬಣ್ಣಗಳಲ್ಲಿ, ಆಕಾರಗಳಲ್ಲಿ, ಅನಂತ ಹೆಸರಿನಲ್ಲಿ ವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳುತ್ತಿದ್ದಾನೆ ಮತ್ತು ಎಲ್ಲವನ್ನು ಪೋಷಿಸುತ್ತಿದ್ದಾನೆ.

ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಶು
ಅರ್ಥ.....
ಪರಂಬ್ರಹ್ಮನು ಎಲ್ಲದರ ಒಳಗೆ ತನ್ನ ಮನೆಯನ್ನು ಮಾಡಿಕೊಂಡು ವಾಸಮಾಡುತ್ತಿದ್ದಾನೆ ಮತ್ತು ಸಾಕ್ಷಿಭೂತನಾಗಿದ್ದಾನೆ ಮತ್ತು ಎಲ್ಲವನ್ನು ಪೋಷಿಸುತ್ತಿದ್ದಾನೆ.

ಅಂತರ್ಬಹಿಶ್ಚ ತತ್ಸರ್ವಂ ವಾಪ್ಯ ನಾರಾಯಣ ಸ್ತಿತಃ
ಅರ್ಥ.....
ಪರಂಬ್ರಹ್ಮನು ಎಲ್ಲದರ ಒಳಗು ಮತ್ತು ಹೊರಗು ವ್ಯಾಪಿಸಿಕೊಂಡಿದ್ದಾನೆ ಅಥವ ತುಂಬಿಕೊಂಡಿದ್ದಾನೆ ಮತ್ತು ಎಲ್ಲವನ್ನು ಪೋಷಿಸುತ್ತಿದ್ದಾನೆ.

ನಮೋಸ್ತು ಅನಂತಾಯ ಸಹಸ್ರಮೂರ್ತಯೆ ಸಹಸ್ರಪಾದಾಕ್ಷಿ ಶಿರೋರುಬಾಹುವೆ ಸಹಸ್ರನಾಮ್ನೆ ಪುರುಷಾಯ ಶಾಶ್ವತೆ ಸಹಸ್ರಕೋಟಿ ಯುಗಧಾರಿಣೇ ನಮಃ.
ಅರ್ಥ.....
ಪರಂಬ್ರಹ್ಮನು ತನ್ನನ್ನು ನಾನಾ ರೂಪಗಳಲ್ಲಿ, ಗುಣಗಳಲ್ಲಿ, ಬಣ್ಣಗಳಲ್ಲಿ,ಆಕಾರಗಳಲ್ಲಿ, ಅನಂತ ಹೆಸರಿನಲ್ಲಿ ವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳುತ್ತಿದ್ದಾನೆ ಮತ್ತು ಅವನು ಅನಂತದವರೆಗೂ ಅಸ್ತಿತ್ವದಲ್ಲಿರತ್ತಾನೆ ಮತ್ತು ಎಲ್ಲವನ್ನು ಪೋಷಿಸುತ್ತಲೇ ಇರುತ್ತಾನೆ.

ಅಂತಹ ಪರಂಬ್ರಹ್ಮನನ್ನು ನಮ್ಮ ಆಂತರ್ಯದಲ್ಲಿ ಧ್ಯಾನಿಸಿ ಅವನ ಅನುಗ್ರಹದಿಂದ ಇಹ ಮತ್ತು ಪರದಲ್ಲಿ ಶ್ರೇಯಸ್ಸನ್ನು ಹೊಂದಬಹುದು.

Brihatmann - The way for realization


ಸಂಧ್ಯಾವಂದನೆಯಲ್ಲಿ ಆಚಮನದ ಮಹತ್ವ

Om Nano Naarayanaaya.

ಸಂಧ್ಯಾವಂದನೆಯಲ್ಲಿ ಆಚಮನದ ಮಹತ್ವ ನನ್ನ ದೃಷ್ಟಿಯಿಂದ........‌‌‌....‌

ನನ್ನ ದೃಷ್ಟಿಯಲ್ಲಿ ಆಚಮನ ಯಜ್ಞ ಯಾಗಾದಿಗಳಿಗೆ ಸಮನಾಗಿದ್ದು, ನಮ್ಮನ್ನು ಆಂತರ್ಯದಲ್ಲಿ ಆಪಾದಮಸ್ತಕವಾಗಿ ವ್ಯಾಪಿಸಿರುವ ಪರಂಬ್ರಹ್ಮನಿಗೆ ಆಚಮನದ ಮೂಲಕ ಅರ್ಘ್ಯವನ್ನು ಕೊಟ್ಟು ಮತ್ತು ನಮ್ಮೊಳಗೆ ವ್ಯಾಪಿಸಿರುವ ಅವನ ಅಂಗಾಂಗಳನ್ನು ಸ್ಪರ್ಶಸಿ ಅವನ ಅಸ್ತಿತ್ವವನ್ನು ಅರಿತು ಪುನೀತರಾಗತ್ತೇವೆ, ದೈವಿಕರಾಗುತ್ತೇವೆ, ಪವಿತ್ರರಾಗುತ್ತೇವೆ ಮತ್ತು ವಾಸ್ತವವಾಗಿ ನಾವು ದೈವೀ ನಿಲಯವೇ ಆಗಿರುತ್ತೇವೆ. ಕಾರಣ ನಮ್ಮೊಳಗೆ ಆ ಪರಂಬ್ರಹ್ಮನು ವಾಸಿಸುತ್ತಿದ್ದಾನೆ ಅಂದರೆ ನಾವು ಒಂದು ಪವಿತ್ರವಾದ ದೇಗುಲವಾಗಿದ್ದೇವೆ. ಇದು
"ಅಂತಃಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಷು" ಎಂದು ಅರ್ಥೈಸುತ್ತದೆ. ಈ ಅಸ್ತಿತ್ವದ ಅರಿವು ಅತಿ ದುರ್ಲಭವಾದ ಮನುಷ್ಯ ಜನ್ಮಕ್ಕೆ ಹೊರತು ಮತ್ಯಾವ ಜೀವಕೋಟಿಗಳಿಗೆ ಲಭ್ಯವಿಲ್ಲ. ಆದ್ದರಿಂದಲೇ ಪುರಂದರದಾಸರು ಹೇಳಿದರು "ಮಾನವ ಜನ್ಮ ದೊಡ್ಡದು ಇದನು ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರ" ಎಂದು.

ಆಚಮನದ ಕ್ರಮ ಮತ್ತು ಅರ್ಥ.... ಈ ಆಚಮನದ ಕ್ರಮವನ್ನು ಆಯಾ ವೇದಗಳಲ್ಲಿ ಹೇಳಿರುವ ಕ್ರಮದಂತೆ ಆಚರಿಸಿ...

ಓಂ ಕೇಶವಾಯ ಸ್ವಾಹ ಎಂದು ಒಂದು ಉದ್ಧರಣೆಯಷ್ಟು ಗಂಗೆಯನ್ನು ನಮ್ಮ ಆಂತರ್ಯದಲ್ಲೀ ನೆಲಸಿರುವ ಕೇಶವ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನಿಗೆ ಅರ್ಪಿಸುತ್ತೇವೆ.

ಓಂ ನಾರಾಯಣಾಯ ಸ್ವಾಹ ಎಂದು ಮತ್ತೊಂದು ಉದ್ಧರಣೆಯಷ್ಟು ಗಂಗೆಯನ್ನು ನಮ್ಮ ಆಂತರ್ಯದಲ್ಲಿ ನೆಲಸಿರುವ ನಾರಾಯಣ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನಿಗೆ ಅರ್ಪಿಸುತ್ತೇವೆ.

ಓಂ ಮಾಧವಾಯ ಸ್ವಾಹ ಎಂದು ಇನ್ನೊಂದು ಉದ್ಧರಣೆಯಷ್ಟು ಗಂಗೆಯನ್ನು ನಮ್ಮ ಆಂತರ್ಯದಲ್ಲಿ ನೆಲಸಿರುವ ಮಾಧವ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನಿಗೆ ಅರ್ಪಿಸುತ್ತೇವೆ.

ಒಂ ಗೋವಿಂದಾಯ ನಮಃ ಎಂದು ನಮ್ಮ ಆಂತರ್ಯದಲ್ಲಿ ನೆಲಸಿರುವ ಗೋವಿಂದ ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನ ಬಲಗೈ ಅಂಗೈಯನ್ನು ನಮ್ಮ ಎಡಗೈಯಿಂದ ಸ್ಪರ್ಶಿಸುತ್ತೇವೆ

ಓಂ ವಿಷ್ಣುವೇ ನಮಃ ಎಂದು ನಮ್ಮ ಆಂತರ್ಯದಲ್ಲೀ ನೆಲಸಿರುವ ವಿಷ್ಣು ಎಂಬ ನಾಮಾಂಕಿತದಿಂದ ಸ್ತುತಿಸಲ್ಪಡುವ ಪರಂಬ್ರಹ್ಮನ ಎಡಗೈ ಅಂಗೈಯನ್ನು ನಮ್ಮ ಬಲಗೈಯಿಂದ ಸ್ಪರ್ಶಿಸುತ್ತೇವೆ.

ಓಂ ಮಧುಸೂದನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಮೇಲ್ತುಟಿಯನ್ನು

ಓಂ ತ್ರಿವಿಕ್ರಮಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಕೆಳತುಟಿಯನ್ನು

ಓಂ ವಾಮನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲಗಡೆ ಕೆನ್ನೆಯನ್ನು

ಓಂ ಶ್ರೀಧರಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡಗಡೆ ಕೆನ್ನೆಯನ್ನು

ಓಂ ಹೃಷೀಕೇಶಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಕೇಶವನ್ನು

ಓಂ ಪದ್ಮನಾಭಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ನಾಭಿ ಮತ್ತು ಪಾದಗಳನ್ನು

ಓಂ ದಾಮೋದರಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಶಿರಸ್ಸನ್ನು

ಓಂ ಸಂಕರ್ಷಣಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ನಾಸಿಕಾಗ್ರವನ್ನು

ಓಂ ವಾಸುದೇವಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲ ನಾಸಿಕವನ್ನು

ಓಂ ಪ್ರದ್ಯುಮ್ನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡ ನಾಸಿಕವನ್ನು

ಓಂ ಅನಿರುದ್ಧಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲಗಣ್ಣನ್ನು

ಓಂ ಪುರುಷೋತ್ತಮಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡಗಣ್ಣನ್ನು

ಓಂ ಅಧೋಕ್ಷಜಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲಗಿವಿಯನ್ನು

ಓಂ ನಾರಸಿಂಹಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡಗಿವಿಯನ್ನು

ಓಂ ಅಚ್ಯುತಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ನಾಭಿ ಅಥವ ಹೊಟ್ಟೆಯನ್ನು

ಓಂ ಜನಾರ್ಧಾನಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಹೃದಯ ಮಂಡಲವನ್ನು

ಓಂ ಉಪೇಂದ್ರಾಯ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಶಿರಸ್ಸನ್ನು

ಓಂ ಹರಿಯೇ ನಮಃ ಎಂದು ಆಂತರ್ಯದಲ್ಲಿ ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಬಲ ಭುಜವನ್ನು

ಓಂ ಶ್ರೀ ಕೃಷ್ಣಾಯ ನಮಃ ಎಂದು ನಮ್ಮನ್ನು ವ್ಯಾಪಿಸಿರುವ ಪರಂಬ್ರಹ್ಮನ ಎಡ ಭುಜವನ್ನು ಸ್ಪರ್ಶಿಸಿ

ನಮ್ಮಲ್ಲಿ ನೆಲಸಿರುವ ಆ ಪರಂಬ್ರಹ್ಮನಿಗೆ ನಮಸ್ಕರಿಸಿ ಅವನ ಕೃಪೆಗೆ ಪಾತ್ರರಾಗುವ ಕೈಂಕರ್ಯವೇ ಆಚಮನ. ಇದರಿಂದ ನಮ್ಮ ಸುತ್ತ ಸಕಾರಾತ್ಮಕ ಅಯಸ್ಕಾಂತ ಶಕ್ತಿ ಹೆಚ್ಚುವುದು ಹೌದು.

ಈ ದಿಟ್ಟಿನಲ್ಲಿ ನಾವುಗಳು ಆಚಮನ ಮಾಡಿದ್ದೇ ಆದಲ್ಲಿ ಆ ಪರಂಬ್ರಹ್ಮನ ಕೃಪೆಗೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ.

ಆದರೆ ಇನ್ನೊಂದು ಮಾತು ನಾವು ಮಾಡುವ ಎಲ್ಲಾ ಕೈಂಕರ್ಯಗಳನ್ನು ಇದೇ ರೀತಿ ಭಗವಂತನಿಗೆ ಅರ್ಪಿಸಿದಲ್ಲಿ ಸರ್ವತೋಮುಖ ಅಭಿವೃದ್ಧಿ ಇಹ ಮತ್ತು ಪರದಲ್ಲಿ ನಿಸ್ಸಂಶಯವಾಗಿ ಆಗುವುದು.

ಈ ವಿಚಾರ ನಿಮಗೆ ‌ ಉಪಯುಕ್ತ ಎಂದೆನಿಸಿದಲ್ಲಿ ಇತರರಿಗೂ ಹಂಚಿ.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization


ಅದ್ವೈತ ಸಿದ್ಧಾಂತ

Om Namo Naarayanaaya.

ಅದ್ವೈತ ಸಿದ್ಧಾಂತ ನನ್ನ ದೃಷ್ಟಿಯಿಂದ......

ಮೊದಲು ಒಂದು ಉಧಾಹರಣೆಯನ್ನು ನೋಡೋಣ
ಒಂದು ಸಿಹಿಯಾದ ಮಾವಿನ ಬೀಜವನ್ನು ಬಿತ್ತೋಣ. ಆ ಬೀಜವು ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ ಹೂವುಬಿಡುತ್ತದೆ. ಹೂವುಗಳು ಕಾಯಾಗುತ್ತವೆ ಮತ್ತು ಕಾಯಿಗಳು ಹಣ್ಣಾಗುತ್ತವೆ ಮತ್ತೆ ಆ ಮಾವಿನ ಮರದ ಬೀಜಗಳನ್ನು ಬಿತ್ತಿದಾಗ ಮತ್ತೆ ಮಾವು ಮರವಾಗಿ ಬೆಳೆದು ಮಾವಿನ ಹಣ್ಣುಗಳನ್ನು ನೀಡುವುದು. ಅಂದರೆ ಯಾವ ಬೀಜವನ್ನು ಬಿತ್ತುತ್ತೇವೊ ಆಯಾ ಮರ ಅಥವ ಗಿಡಗಳು ಬೆಳೆದು ಮೂಲ ಬೀಜದ ಗುಣಧರ್ಮವನ್ನು ಹೊಂದಿರುತ್ತದೆ ಮತ್ತು ಭೌತಿಕವಾಗಿ ಅಭಿವ್ಯಕ್ತಗೊಳ್ಳತ್ತದೆ ಮತ್ತು ಹೊತ್ತು ತಂದ ಗುಣಧರ್ಮವನ್ನು ಮುಂದುವರೆಸುತ್ತದೆ.

ಹೌದು, ಆದರೆ ಈ ವಿಚಾರ ಎಲ್ಲರಿಗೂ ತಿಳಿದಿರುವಂತಹ ವಿಚಾರವೇ ಆಗಿದೆ. ನಮಗನಿಸಬಹುದು ಇದರಲ್ಲೇನಿದೆ ವಿಶೇಶ ಎಂದು.

ಹೌದು ಇದರಲ್ಲಿ ಒಂದು ಮಹತ್ತರವಾದ ವಿಶೇಷವಿದೆ.

ಹಾಗಾದರೆ ವಿಷಯಕ್ಕೆ ಬರೋಣ. ಈಗ ನಾವುಗಳು ನಮಗೆ ಒಂದು ಪ್ರಶ್ನೆಯನ್ನು ಹಾಕಿಕೊಳ್ಳೋಣ. ನಾವುಗಳು ಯಾರಿಂದ ಸೃಷ್ಟಿಸಲ್ಪಟ್ಟಿದ್ದೇವೆ. ಎಲ್ಲರಿಗೂ ತಿಳಿದಿರವ ಹಾಗೆ ಭಗವಂತನಿಂದ ಸೃಷ್ಟಿಸಲ್ಪಟ್ಟಿದ್ದೇವೆ. ಹಾಗಾದರೆ ಭಗವಂತನಲ್ಲಿ ಏನೇನು ವಿಶೇಷತೆ ಇದೆಯೊ ಅವೆಲ್ಲವೂ ನಮ್ಮಲ್ಲಿ ಇರಲೇಬೇಕಲ್ಲವೇ.

ಅಂದರೆ ನಾವುಗಳು ಭಗವಂತನ ಪ್ರತಿತಬಿಂಬವಾಗಿದ್ದೇವೆ ಮತ್ತು ಭಗವಂತನ ಸ್ವರೂಪವೇ ಆಗಿದ್ದೇವೆ. ಅವನಲ್ಲಿ ಇರುವ ಎಲ್ಲಾ ಶಕ್ತಿ, ಚೈತನ್ಯ, ಜ್ಞಾನ, ಪ್ರಕಾಶ, ಪ್ರಜ್ಞೆ, ವ್ಯಕ್ತ, ಅವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳವಿಕೆ, ನಿರಾಕಾರ, ಸಾಕಾರ, ಸಗುಣ, ನಿರ್ಗುಣ, ನಿರಂಜನ, ರಸ, ಗಂಧ, ನಾಮಸ್ವರೂಪ, ನಿತ್ಯ, ಸತ್ಯ, ಅನಂತ, ಪ್ರೇಮಮಯ, ಕ್ಷಮಾಮಯ, ಸೃಷ್ಟಿ, ಸ್ಥಿತಿ, ಲಯ, ಅವಿನಾಶಿ ಮುಂತಾದವುಗಳು ನಮ್ಮ ಆಂತರ್ಯದಲ್ಲಿ ಅಸ್ತಿತ್ವದಲ್ಲಿವೆ. ಇವುಗಳು ಪ್ರಕೃತಿಯೊಂದಿಗೆ ಕೂಡಿದಾಗ ಭೌತಿಕವಾಗಿ ವ್ಯಕ್ತಗೊಳ್ಳತ್ತವೆ.

ಆದರೆ ಅವುಗಳ ಬಗ್ಗೆ ನಮಗೆ ಪರಿಪೂರ್ಣವಾದ ಅರಿವಿರುವುದಿಲ್ಲ. ಕಾರಣ ಪರಿಪೂರ್ಣ ಅಸ್ತಿತ್ವದಲ್ಲಿರುವ ಪ್ರಕೃತಿಯೊಂದಿಗೆ ನಮ್ಮ ಬೆಳವಣಿಗೆ ಆಗಿರುವುದಿಲ್ಲ. ಪ್ರಕೃತಿ ಯಾವಾಗಲೂ ಪೂರ್ಣಪ್ರಮಾಣದಲ್ಲಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಅದು ಪಂಚ ಮಹಾಭೂತಗಳಿಂದ, ಪಂಚ ಮಹಾಪ್ರಾಣಗಳಿಂದ, ಪಂಚ ಮಹಾಇಂದ್ರಿಯಗಳಿಂದ ಮತ್ತು ಸಂಬಂಧಪಟ್ಟ ಅಂಗಾಂಗ ಮತ್ತು ಗುಣಧರ್ಮಗಳಿಂದ ಕೂಡಿರುತ್ತದೆ. ಅದು ಬ್ರಹ್ಮಾಂಡವೇ ಆಗಿರುತ್ತದೆ. ಜೀವಾತ್ಮರು ವ್ಯಕ್ತ ಮತ್ತು ಅಭಿವ್ಯಕ್ಯಗೊಳ್ಳುವುದು ಈ ಪ್ರಕೃತಿಯ ಮೂಲಕವೆ.

ಈ ಆತ್ಮನು ಪ್ರಕೃತಿಯನ್ನು ಪ್ರವೇಶಿಸಿದ ಕೂಡಲೆ ಪ್ರಕೃತಿಯು ಜಾಗೃತಗೊಂಡು ಸ್ತುಪ್ತವಾಗಿರವ ಅಂಗಾಂಗ ಗಳನ್ನು ಜೀವಾತ್ಮರಲ್ಲಿ ಪ್ರಭಲವಾಗಿ ಸ್ತುಪ್ತವಾಗಿರುವ ಸಂಸ್ಕಾರಗಳ ಅನುಗುಣವಾಗಿ ಆಯಾ ಶರೀರಗಳನ್ನು ಧಾರಣೆಮಾಡಲು ಸಹಕರಿಸುತ್ತಾಳೆ ಮತ್ತು ಆಯಾ ಗುಣಧರ್ಮವನ್ನು ಪ್ರಕಟಗೊಳಿಸಿ ಸಹಕರಿಸುತ್ತಾಳೆ.

ಅಂದರೆ ಆತ್ಮದೃಷ್ಟರಾಗಿರವ ಜೀವಕೋಟಿಗಳು ತಮ್ಮಲ್ಲಿ ಅಡಕವಾಗಿರುವ ಮೂಲ ಚೈತನ್ಯ ಮತ್ತು ಪ್ರಜ್ಞೆಯ ಮೂಲಕ ಪ್ರಕೃತಿಯನ್ನು ಪ್ರಚೋದಿಸಿ ವ್ಯಕ್ತ ಮತ್ತು ಅಭಿವ್ಯಕ್ತಗೊಳ್ಳತ್ತವೆ.

ಹಾಗದರೆ ಜೀವಾತ್ಮರು ಬ್ರಹ್ಮ ಸಮಾನರಾಗಿರತ್ತಾರೆ.
ಇದು ಅಹಂ ಬ್ರಹ್ಮಾಸ್ಮೀ ಎಂದೆನಿಸುತ್ತದೆ ಮತ್ತು
ಸರ್ವಂ ಕಲ್ವಿದಂ ಬ್ರಹ್ಮ ಎಂಬ ಉಕ್ತಿಗೆ ಪುಷ್ಟಿ ನೀಡುತ್ತದೆ.

ಓಂ ಶಾಂತಿ ಶಾಂತಿ ಶಾಂತಿಃ

Brihatmann - The way for realization